ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಚಟುವಟಿಕೆಗಳು

 1. ಕೃಷಿ ಹಾಗೂ ತೋಟಗಾರಿಕೆಯ ವಿವಿಧ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಹಾಗೂ ರಫ್ತು
 2. ಮಾವಿನಹಣ್ಣು, ದಾಳಿಂಬೆ, ದ್ರಾಕ್ಷಿ, ನುಗ್ಗೆಕಾಯಿ, ಕಲ್ಲಂಗಡಿ, ಮಸೂರ್ ಬೇಳೆ/ಕೆಂಪು ಬೇಳೆ, ಹುಚ್ಚೆಳ್ಳು, ತೆಂಗಿನಕಾಯಿ, ಈರುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ, ಸಕ್ಕರೆ ಹಾಗೂ ಇತರೆ ಹಣ್ಣು ಹಾಗೂ ತರಕಾರಿಗಳನ್ನು ಸಿಂಗಾಪೂರ್, ಶ್ರೀಲಂಕಾ, ಮಧ್ಯಪ್ರಾಚ್ಯ, ಅಮೇರಿಕಾ, ಕುವೈತ್, ಈಜಿಪ್ಟ್, ಸೌದಿ ಅರೇಬಿಯಾ, ಮೆಕ್ಸಿಕೊ, ಟರ್ಕಿ, ಮಾಲ್ಡಿವ್ಸ್, ಮಾರಿಷಸ್, ಯೂರೋಪ್, ಇತ್ಯಾದಿ ದೇಶಗಳಿಗೆ ರಫ್ತು ಮಾಡಿದೆ.
 3. ಸಮೃದ್ಧ ಎಣ್ಣೆಯೊಂದಿಗೆ ಅತೀ ಹೆಚ್ಚು ಇಳುವರಿ ನೀಡುವ ಹಾಗೂ ಉತ್ತಮ ಗುಣಮಟ್ಟದ ಹುಚ್ಚೆಳ್ಳು ತಳಿಗಳನ್ನು ಅಭಿವೃದ್ಧಿಪಡಿಸಲು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
 4. ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಹಾಗೂ ಅಭಿವೃದ್ಧಿ ಫೌಂಡೇಷನ್‍ನಿಂದ ಉತ್ತಮ ಗುಣಮಟ್ಟದ ಬೆಂಗಳೂರು ರೋಸ್ ಈರುಳ್ಳಿ ಹಾಗೂ ತಿಳಿ ಕೆಂಪು ಈರುಳ್ಳಿ ಬೀಜಗಳ ಸಂಗ್ರಹ ಹಾಗೂ ಅವುಗಳನ್ನು ರೈತರಿಗೆ ವಿತರಿಸುವುದು.
 5. ರಫ್ತು ಗುಣಮಟ್ಟದ ಉತ್ಪನ್ನವನ್ನು ಬೆಳೆಯುವ ಕುರಿತು ರೈತರಲ್ಲಿ ಅರಿವು ಸೃಷ್ಟಿಸಲಾಗಿದೆ. ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳ ಸಮಾಲೋಚನೆಯೊಂದಿಗೆ ರೈತರ ಅನುಕೂಲಕ್ಕಾಗಿ ವಿಚಾರಗೋಷ್ಠಿಗಳು, ಕಾರ್ಯಾಗಾರಗಳನ್ನು ಆಯೋಜಿಸುವುದು ಹಾಗೂ ದ್ರಾಕ್ಷಿ, ಮಾವು, ಬೆಂಗಳೂರು ರೋಸ್ ಈರುಳ್ಳಿ ಹಾಗೂ ದಾಳಿಂಬೆ, ಇತ್ಯಾದಿಯನ್ನು ಬೆಳೆಯುವ ಪ್ರದೇಶಗಳಿಗೆ ಅಧ್ಯಯನ ಪ್ರವಾಸಗಳನ್ನು ಏರ್ಪಡಿಸಿದೆ.
 6. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿಗಳ ಸಹಾಯದೊಂದಿಗೆ ರಫ್ತು ಗುಣಮಟ್ಟದ ದ್ರಾಕ್ಷಿಗಳನ್ನು ಬೆಳೆಯುವ ಪದ್ಧತಿ ಎಂಬ ಶೀರ್ಷಿಕೆಯ ಕೈಪಿಡಿಯನ್ನು ಪ್ರಕಟಿಸಿ, ಬಿಜಾಪುರದಲ್ಲಿ ದ್ರಾಕ್ಷಿ ಬೆಳೆಗಾರರು/ದ್ರಾಕ್ಷಿ ಬೆಳೆಯುವ ಸಂಘಗಳಿಗೆ ಹಂಚಲಾಗಿದೆ.
 7. ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಡಬ್ಲ್ಯೂಟಿಒ ಕೋಶದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ
 8. ಕನಾಟಕದಿಂದ ಕೃಷಿ ಹಾಗೂ ತೋಟಗಾರಿಕಾ ಸರಕುಗಳ ರಫ್ತನ್ನು ಮಾಡುವ ಉದಯೋನ್ಮುಖ ರಫ್ತು ಉದ್ಯಮಿಗಳಿಗೆ ಅಗತ್ಯ ನೆರವು ಹಾಗೂ ಮಾರ್ಗದರ್ಶನ ಒದಗಿಸುವುದು.
 9. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ನೆರವಿನೊಂದಿಗೆ ‘ರಫ್ತು ಗುಣಮಟ್ಟದ ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಯುವ ಪದ್ಧತಿ’ ಎಂಬ ಕೈಪಿಡಿಯನ್ನು ಪ್ರಕಟಿಸಿ ರೈತರಿಗೆ ಹಂಚಲಾಗಿದೆ.
 10. ಕರ್ನಾಟಕದಲ್ಲಿ ಗರ್ಕಿನ್‍ಗಳು ಹಾಗೂ ಬೆಂಗಳೂರು ರೋಜ್ ಈರುಳ್ಳಿ ತಳಿಗಳ ಕೃಷಿ ರಫ್ತುವಲಯದ ಅನುಷ್ಠಾನಕ್ಕಾಗಿ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಸುತ್ತಿದೆ
 11. ಭಾರತದಿಂದ ಎಲ್ಲಾ ವಿಧದ ಈರುಳ್ಳಿಗಳ ರಫ್ತಿಗಾಗಿ ಭಾರತ ಸರ್ಕಾರ ನೇಮಿಸಲ್ಪಟ್ಟಿರುವ ರಾಜ್ಯ ವ್ಯಾಪಾರ ಸಂಸ್ಥೆಯಾಗಿ (ಕೆನಲೈಜಿಂಗ್ ಏಜೆನ್ಸಿ) ಕಾರ್ಯನಿರ್ವಹಿಸುತ್ತಿದೆ
 12. ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ರಫ್ತಿಗಾಗಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಹಂತ ಹಂತವಾಗಿ ಕೊಯ್ಲಿನ ನಂತರದ ಮೂಲಭೂತ ಸೌಲಭ್ಯಗಳನ್ನು ಸೃಷ್ಟಿಸುವ ಕೆಲಸದಲ್ಲಿ ಭಾಗಿ.
 13. ರೈತರ ಅನುಕೂಲಕ್ಕಾಗಿ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗಾಗಿ ಸಾರ್ವಜನಿಕ-ಖಾಸಗಿ-ಪಾಲುದಾರಿಕೆಯಡಿ ಜಂಟಿ ಸಹಭಾಗಿತ್ವದ ಉದ್ಯಮಗಳಿಗೆ ಪ್ರೋತ್ಸಾಹ ನೀಡುವುದು.
 14. ರಫ್ತನ್ನು ಹೆಚ್ಚಿಸುವ ಉದ್ದೇಶದಿಂದ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ವಸ್ತುಪ್ರದರ್ಶನಗಳಲ್ಲಿ ಭಾಗವಹಿಸಿ ಕರ್ನಾಟದ ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳ ರಫ್ತು ಸಾಮಥ್ರ್ಯವನ್ನು ಬಿಂಬಿಸುವುದುಇತ್ತೀಚಿನ ನವೀಕರಣ​ : 27-05-2020 12:35 PM ಅನುಮೋದಕರು: Approver kappec


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್)
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ