ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ರಫ್ತನ್ನು ಆರಂಭಿಸುವ ಕುರಿತು

ರಫ್ತು ಉತ್ತೇಜಕತೆಗೆ ಸಂಬಂಧಪಟ್ಟ ಸಂಸ್ಥೆಗಳು

 

ರಫ್ತು ವ್ಯಾಪಾರ ವಿಧಾನ ಹಾಗೂ ಸಂಬಂಧಪಟ್ಟ ವಿಚಾರಗಳು 

 • ರಫ್ತಿಗೆ ಹೆಚ್ಚು ಬೇಡಿಕೆಯಿರುವ ಒಂದು ‘ಗುಣಮಟ್ಟ’ದ ಉತ್ಪನ್ನವನ್ನು ಆಯ್ಕೆ ಮಾಡಿಕೊಳಿ
 • ಒಂದು ನಿರ್ದಿಷ್ಟವಾದ ವಿದೇಶೀ ಮಾರುಕಟ್ಟೆಯನ್ನು ಆಯ್ಕೆ ಮಾಡಿಕೊಳ್ಳಿ
 • ಆರಂಭದಲ್ಲಿ ಕನಿಷ್ಠ ಮೂರು ರಾಷ್ಟ್ರಗಳು ಹಾಗೂ ಕೆಲವು ಉತ್ಪನ್ನಗಳ ಮೇಲೆ ಮಾತ್ರ ಗಮನ ನೀಡಿ.
 • ನೀವು ಆಯ್ಕೆ ಮಾಡುವ ಉತ್ಪನ್ನ(ಗಳು)ವನ್ನು ಸಾಕಷ್ಟು ಪ್ರಮಾಣದಲ್ಲಿ ಹಾಗೂ ಸ್ಪರ್ಧಾತ್ಮಕ ದರದಲ್ಲಿ ತಯಾರಿಸುವುದು ಅಥವಾ ಖರೀದಿ/ಸಂಗ್ರಹ, ಗುಣಮಟ್ಟ, ತಲುಪಿಸುವ ವೇಳಾಪಟ್ಟಿ ಹಾಗೂ ವಿದೇಶಿ ಖರೀದಿದಾರರ ಇತರೆ ನಿಯಮ ಹಾಗೂ ಷರತ್ತುಗಳನ್ನು ಖಾತ್ರಿಪಡಿಸಿಕೊಳ್ಳಿ.
 • ಇತರೆ ತಯಾರಕರು ಉತ್ಪಾದಿಸುವ ಅದೇ ರೀತಿಯ ಉತ್ಪನ್ನಗಳ ಕುರಿತಂತೆ ಆಯ್ದ ಮಾರುಕಟ್ಟೆಗಳಲ್ಲಿ, ಅವುಗಳ ದರಗಳು, ಮಾರುಕಟ್ಟೆ ತಂತ್ರಗಳು, ವ್ಯಾಪಾರದ ನಿಯಮಾವಳಿಗಳು, ಇತ್ಯಾದಿ ವಿವರಗಳನ್ನು ಸಂಗ್ರಹಿಸಿ. ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ವಿದೇಶೀ ಖರೀದಿದಾರರಿಗೆ ನಿಮ್ಮ ಉತ್ಪನ್ನ(ಗಳು)ವನ್ನು ರಿಯಾಯಿತಿ ದರದಲ್ಲಿ ಒದಗಿಸಿ.
 • ನಿರ್ದಿಷ್ಟವಾದ ಮಾರುಕಟ್ಟೆಗೆ ನೀವು ರಫ್ತು ಮಾಡಲು ಪ್ರಸ್ತಾಪಿಸಿದ ಉತ್ಪನ್ನ (ಗಳ)ಕ್ಕೆ ಇರುವ ಸ್ಪರ್ಧಾತ್ಮಕತೆಯ ಪ್ರಮಾಣವನ್ನು ಅಂದಾಜಿಸಿ

op

 ರಫ್ತುದಾರರಾಗುವ ವಿಧಾನ 

 • ಆಮದು-ರಫ್ತು ಸಂಕೇತ ಸಂಖ್ಯೆ ಪಡೆಯುವ ಸಲುವಾಗಿ ಸಂಬಂಧಪಟ್ಟ ವಿದೇಶ ವ್ಯಾಪಾರದ ಪ್ರಧಾನ ಜಂಟಿ ನಿರ್ದೇಶಕರ ಕಛೇರಿಗೆ ಸಂಬಂಧಪಟ್ಟ ಎಲ್ಲಾ ವಿವರಗಳು ಹಾಗೂ ಅಗತ್ಯ ಶುಲ್ಕದೊಂದಿಗೆ ಅರ್ಜಿ ಸಲ್ಲಿಸುವುದು.
 • ನಿರ್ದಿಷ್ಟವಾದ ಮಾರುಕಟ್ಟೆಯನ್ನು ಗುರುತಿಸಲು ಹಾಗೂ ಗುಣಮಟ್ಟದ ಉತ್ಪನ್ನವನ್ನು ಆಯ್ಕೆ ಮಾಡಲು ಹಾಗೂ ಎಲ್ಲಾ ಆಮದು-ರಫ್ತು ವ್ಯಾಪಾರ ವಲಯಗಳು ಒಪ್ಪಿಕೊಂಡಿರುವ ಕರೆನ್ಸಿಯಾದ ಯು.ಎಸ್. ಡಾಲರ್‍ಗಳಲ್ಲಿ ದರಗಳನ್ನು ಒದಗಿಸಲು. ದರಗಳನ್ನು ಈ ಕೆಳಕಂಡಂತೆ ನಮೂದಿಸಬಹುದು.
  1. ಎಫ್.ಒ.ಬಿ.: ಅಂದರೆ “ಜಿಡಿee oಟಿ boಚಿಡಿಜ”. ಸರಕನ್ನು ಹಡಗಿಗೆ ಲೋಡ್ ಮಾಡುವವರೆಗೂ ಸರಕು ಡೆಲಿವರಿಯನ್ನು ಉಚಿತವಾಗಿ ತಲುಪಿಸಲಾಗುತ್ತದೆ.
  2. ಸಿ & ಎಫ್: ಅಂದರೆ ದರ & ಸಾಗಣೆ ಸರಕು. ಈ ದರ ತಲುಪಬೇಕಾದ ಸ್ಥಳದವರೆಗಿನ ಸರಕು ಶುಲ್ಕವನ್ನು ಒಳಗೊಂಡಿದೆ. ಖರೀದಿದಾರರು ಸರಕು ತಲುಪುವ ಸ್ಥಳದಲ್ಲಿ ಕೇವಲ ವಿಮೆ ಹಾಗೂ ಡೆಲಿವರಿ ಶುಲ್ಕಗಳನ್ನು ಮಾತ್ರ ಭರಿಸಬೇಕಾಗುತ್ತದೆ.
  3. ಸಿ.ಐ.ಎಫ್: ಅಂದರೆ ದರ, ವಿಮೆ ಹಾಗೂ ಸರಕು ಸಾಗಣೆ. ಅಂತಿಮ ಸ್ಥಳ ತಲುಪುವ ಸ್ಥಳದವರೆಗೆ ಎಲ್ಲಾ ವೆಚ್ಚಗಳನ್ನೂ ಒಳಗೊಂಡಿದೆ.
 • ಖರೀದಿಸುವವರಿಗೆ ದರ ಒಪ್ಪಿಗೆಯಾಧರೆ ಕೂಡಲೇ ಅವರು ‘ಲೆಟರ್ ಆಫ್ ಕ್ರೆಡಿಟ್’ ಅನ್ನು ತೆರೆಯುವರು ಅಥವಾ ಮಾರಾಟಗಾರರ ಖಾತೆಗೆ ಬ್ಯಾಂಕ್ ಮೂಲಕ ಮುಂಗಡ ಹಣವನ್ನು ಪಾವತಿಸುತ್ತಾರೆ.
 • ಆ ‘ಲೆಟರ್ ಆಫ್ ಕ್ರೆಡಿಟ್’ ಬದಲಾಯಿಸಲಾಗದಿರುವಂತಹ ನಮೂನೆಯಲ್ಲಿರಬೇಕು.
 • ಈ ಪತ್ರ ಒಪ್ಪಿದ ನಂತರ ಮಾರಾಟಗಾರರು ‘ಲೆಟರ್ ಆಫ್ ಕ್ರೆಡಿಟ್’ನಲ್ಲಿ ನೀಡಿರುವ ತಮ್ಮ ಸರಕಿನ ಗುಣಮಟ್ಟ, ಪ್ಯಾಕಿಂಗ್ ವಿವರಗಳ ಪ್ರಕಾರ ಸಿದ್ಧಪಡಿಸಿಕೊಳ್ಳಬೇಕು ಹಾಗೂ ಲೋಡಿಂಗ್ ಮಾಡುವ ಬಂದರಿಗೆ ಸರಕನ್ನು ಕಳುಹಿಸಬೇಕು. ನಂತರದ ಪ್ರಕ್ರಿಯೆಯನ್ನು ಅಂದರೆ ಸರಕನ್ನು ಖರೀದಿದಾರರಿಗೆ ತಲುಪಿಸುವ ಪ್ರಕ್ರಿಯೆಯನ್ನು ಸಿ&ಎಫ್ ಏಜೆಂಟರ್ ನೋಡಿಕೊಳ್ಳುತ್ತಾರೆ.
 • ಸಾಗಣೆ (ಶಿಪ್‍ಮೆಂಟ್) ಪೂರ್ತಿಯಾದ ನಂತರ ಸಿ&ಎಫ್ ಏಜೆಂಟ್, ‘ಲೆಟರ್ ಆಫ್ ಕ್ರೆಡಿಟ್’ ಪ್ರಕಾರ ಎಲ್ಲಾ ಸಾಗಣೆ ದಾಖಲಾತಿಗಳನ್ನು ಸಿದ್ಧಪಡಿಸುತ್ತಾರೆ.
 • ಮೂಲ ಸಾಗಣೆ ದಾಖಲೆಗಳು ದೊರೆತ ನಂತರ ಮಾರಾಟಗಾರರು ವಾಣಿಜ್ಯ ಇನ್‍ವಾಯ್ಸ್, ಪ್ಯಾಕಿಂಗ್ ಲಿಸ್ಟ್, ಬಿಲ್ಸ್ ಆಫ್ ಎಕ್ಸ್‍ಚೇಂಜ್‍ಗಳನ್ನು ಸಿದ್ಧಪಡಿಸಿ, ಪಡೆದ ಮೂಲ ಎಲ್‍ಸಿಯೊಂದಿಗೆ ಎಲ್ಲಾ ದಾಖಲೆಗಳನ್ನು ಬ್ಯಾಂಕ್‍ಗೆ ಸಲ್ಲಿಸಬೇಕು.
 • ಬ್ಯಾಂಕ್ ‘ಎಲ್‍ಸಿ’ಯಲ್ಲಿ ಒದಗಿಸಿರುವ ನಿಯಮ ಹಾಗೂ ಷರತ್ತುಗಳ ಪ್ರಕಾರ ಕಟ್ಟುನಿಟ್ಟಾಗಿ ಎಲ್ಲಾ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಮಾರಾಟಗಾರರ ಖಾತೆಗೆ ಕ್ರೆಡಿಟ್ ನೀಡುತ್ತದೆ ಹಾಗೂ ಹಣ ಪಾವತಿ ಪಡೆಯಲು ದಾಖಲೆಗಳನ್ನು ಖರೀದಿದಾರರ ಬ್ಯಾಂಕ್‍ಗೆ ಒದಗಿಸುತ್ತದೆ. ಸಾಧಾರಣವಾಗಿ 10-15 ದಿನಗಳ ಅವಧಿಯೊಳಗೆ ಹಣ ಪಾವತಿಯಾಗುತ್ತದೆ.
 • ‘ಲೆಟರ್ ಆಫ್ ಕ್ರೆಡಿಟ್’ ಹಾಗೂ ಮುಂಗಡ ಪಾವತಿಯ ಜೊತೆಗೆ, ಬಿಲ್ ಪಾವತಿಗಳು ಡಿ.ಪಿ. ರೂಪದಲ್ಲೂ ಇರಬಹುದು (ಜoಛಿumeಟಿಣs ಚಿgಚಿiಟಿsಣ ಠಿಚಿಥಿmeಟಿಣ). ಅಂದರೆ ರಫ್ತು ಮಾಡುವವರ ಉತ್ಪನ್ನವನ್ನು ಸಾಗಿಸುತ್ತಾರೆ ಹಾಗೂ ತಮ್ಮ ಬ್ಯಾಂಕ್ ಮೂಲಕ ಖರೀದಿಸುವವರ ಬ್ಯಾಂಕ್‍ಗೆ ಎಲ್ಲಾ ಮೂಲ ದಾಖಲೆಗಳನ್ನು ಒದಗಿಸುತ್ತಾರೆ. ಖರೀದಿಸುವವರ ಬ್ಯಾಂಕ್ ಖರೀದಿದಾರರಿಂದ ಹಣ ಸಂಗ್ರಹಿಸಿ, ದಾಖಲೆಗಳನ್ನು ಬಿಡುಗಡೆ ಮಾಡುತ್ತದೆ ಹಾಗೂ ಬ್ಯಾಂಕಿಂಗ್ ಚಾನೆಲ್‍ಗಳ ಮೂಲಕ ಭಾರತದ ರಫ್ತುದಾರರಿಗೆ ಹಣವನ್ನು ಕಳುಹಿಸುತ್ತದೆ.
 • ಬೇಗನೆ ಕೆಡುವಂತಹ ಉತ್ಪನ್ನಗಳಿದ್ದರೆ, ಖರೀದಿದಾರರು ಎಲ್/ಸಿಯನ್ನು ತೆರೆಯುವುದಿಲ್ಲ, ಮುಂಗಡ ಹಣವನ್ನು ಪಾವತಿಸುವುದಿಲ್ಲ ಅಥವಾ ಮುಂಚಿತವಾಗಿ ಒಪ್ಪಿಕೊಂಡಿರುವಂತಹ ದರದ ಡಿ.ಪಿ. ನಿಯಮಗಳಿಗೆ ಬದ್ಧವಾಗಿರುವುದಿಲ್ಲ. ಇದೆಲ್ಲವೂ ಕನ್‍ಸೈನ್‍ಮೆಂಟ್ ಮಾರಾಟ ಆಧಾರದ ಮೇಲೆ ನಡೆಯುತ್ತದೆ. ರಫ್ತುದಾರರು ಉತ್ಪನ್ನ ಅಥವಾ ಸರಕನ್ನು ಸಾಗಣೆ ಮಾಡಿ, ಮೂಲ ದಾಖಲೆಗಳನ್ನು ಖರೀದಿದಾರರಿಗೆ ಕಳುಹಿಸುತ್ತಾರೆ ಹಾಗೂ ಖರೀದಿದಾರರು ಒಂದೊಂದು ಸಂದರ್ಭದಲ್ಲಿ ಸ್ವಲ್ಪ ಹಣವನ್ನು ಮುಂಗಡವಾಗಿ ಕಳುಹಿಸುತ್ತಾರೆ ಹಾಗೂ ಅಂತಿಮವಾಗಿ ಪೂರ್ತಿ ಹಣವನ್ನು ರಫ್ತು ಮಾಡಿದ ಸರಕಿನ ಮಾರಾಟದ ನಂತರ ಮಾಡುತ್ತಾರೆ.
 • ಇ.ಸಿ.ಜಿ.ಸಿ. ಪಾತ್ರ (ಇಘಿPಔಖಖಿ ಅಖಇಆIಖಿ ಉUಂಖಂಓಖಿಇಇ ಅಔಖPಓ ಔಈ IಓಆIಂ ಐಖಿಆ) ರಫ್ತುದಾರರಿಗೆ ತಮ್ಮ ರಫ್ತು ವಹಿವಾಟಿನಲ್ಲಿ ಸಂಭವಿಸಬಹುದಾದಂತಹ ಸನ್ನಿವೇಶಗಳನ್ನು ಎದುರಿಸುವಲ್ಲಿ ಇ.ಸಿ.ಜಿ.ಸಿ. ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆಮದು ಮಾಡಿಕೊಳ್ಳುವವರು ಅಥವಾ ಆ ರಾಷ್ಟ್ರದ ಕದನ, ದೊಂಬಿ, ಇತ್ಯಾದಿಗಳ ಕಾರಣದಿಂದಾಗಿ ಹಣ ಪಾವತಿಯಾಗದಿರುವುದು, ಹಾಗೂ ವರ್ಗೀಕೃತ ರಾಷ್ಟ್ರಗಳನ್ನು ಆಧರಿಸಿ ವಿಧಿಸುವ ಅಲ್ಪ ಪ್ರೀಮಿಯಂ (ಉದಾಹರಣೆಗೆ: ಒಟ್ಟು ಮೌಲ್ಯದ 0.3% ನಿಂದ 0.8%)ನಂತಹ ವಿವಿಧ ರೀತಿಯ ಹಾನಿಗಳನ್ನು (ರಿಸ್ಕ್) ಇ.ಸಿ.ಜಿ.ಸಿ. ವಹಿಸುತ್ತದೆ.

 

ವಿಶ್ವ ವ್ಯಾಪಾರ ಸಂಘಟನೆ ಕುರಿತು

     1947ರಲ್ಲಿ ಪರಿಚಯಿಸಲಾದಂತಹ ಗ್ಯಾಟ್ (geಟಿeಡಿಚಿಟ ಚಿgಡಿeemeಟಿಣ oಟಿ ಣಡಿಚಿಜe ಚಿಟಿಜ ಣಚಿಡಿiಜಿಜಿ) ಒಪ್ಪಂದದಡಿ ಕೈಗೊಳ್ಳಲಾದ ನಿರ್ಧಾರಗಳ ಪರಿಣಾಮವಾಗಿ ಜನವರಿ 1, 1995ರಲ್ಲಿ ವಿಶ್ವ ವ್ಯಾಪಾರ ಸಂಘಟನೆ ಅನುಷ್ಠಾನಕ್ಕೆ ಬಂದಿತು. ಪ್ರಸ್ತುತ ಈ ಒಪ್ಪಂದದಡಿ 145 ರಾಷ್ಟ್ರಗಳಿದ್ದು, ಭಾರತವು ವಿಶ್ವ ವ್ಯಾಪಾರ ಸಂಘಟನೆಯ ಸ್ಥಾಪನಾ ರಾಷ್ಟ್ರವಾಗಿದೆ.

 

ಮೂಲಭೂತ ತತ್ವಗಳು 

 • ಸದಸ್ಯ ರಾಷ್ಟ್ರಗಳ ನಡುವೆ ಏಕರೂಪ ತತ್ವಗಳು
 • ರಾಷ್ಟ್ರದ ಒಳಗೆ ಏಕರೂಪ ತತ್ವಗಳು
 • ಮುಕ್ತ ವ್ಯಾಪಾರ – ಕ್ರಮೇಣ ಮಾತುಕತೆಗಳ ಮೂಲಕ
 • ಭವಿಷ್ಯದ ಗ್ರಹಿಕೆ - ಬದ್ಧತೆಯುಳ್ಳ ದರಪಟ್ಟಿ ಮೂಲಕ
 • ನ್ಯಾಯಯುತ ಸ್ಪರ್ಧಾತ್ಮಕತೆಗೆ ಪ್ರೋತ್ಸಾಹ

 

ಹಿಂತೆಗೆದುಕೊಳ್ಳುವ ಅವಕಾಶ:

ಆರು ತಿಂಗಳ ಮುಂಚಿತ ಸೂಚನೆ ನೀಡುವ ಮೂಲಕ ಯಾವುದೇ ರಾಷ್ಟ್ರ ಈ ಒಪ್ಪಂದದಿಂದ ಹಿಂದಕ್ಕೆ ಸರಿಯಬಹುದು.

ಭಾರತದ ದರಪಟ್ಟಿ ಬದ್ಧತೆಗಳು:

ಪ್ರಾಥಮಿಕ ಉತ್ಪನ್ನಗಳಿಗೆ 100%

ಸಂಸ್ಕರಿಸಿರುವ ಉತ್ಪನ್ನಗಳಿಗೆ 150%

ಖಾದ್ಯ ತೈಲಗಳಿಗೆ 300%

ಇತ್ತೀಚಿನ ನವೀಕರಣ​ : 27-05-2020 01:16 PM ಅನುಮೋದಕರು: Approver kappec


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್)
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ